ಬನ್ನಿ ಕನ್ನಡ ಕಲಿಯೋಣ
ಕನ್ನಡ ಮರೆಯುವುದು ಬೇಡ... ಬನ್ನಿ ಕನ್ನಡ ಕಲಿಯೋಣ/ಕಲಿಸೋಣ.I •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳು •ಛಂದಸ್ಸು •ಷಟ್ಟದಿ ಪದ್ಯಗಳು •ರಗಳೆಗಳು •ಅಕ್ಷರ ಗಣಗಳು •ಅಲಂಕಾರಗಳು •ನವರಸಗಳು •ಪತ್ರಲೇಖನ •ಪ್ರಬಂಧ 🙏🙏🙏🙏🙏🙏 ಕನ್ನಡ ವ್ಯಾಕರಣ “ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”.. ಕನ್ನಡ ವರ್ಣಮಾಲೆ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ ವರ್ಣಮಾಲೆಯ ವಿಧಗಳು *.ಸ್ವರಗಳು *.ವ್ಯಂಜನಗಳು *.ಯೋಗವಾಹಗಳು ಸ್ವರಗಳು:13 “ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”. ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಸ್ವರಗಳ ವಿಧಗಳು *.ಹ್ರಸ್ವಸ್ವರ *.ದೀರ್ಘ ಸ್ವರ *.ಪ್ಲುತ ಸ್ವರ ಹ್ರಸ್ವ ಸ್ವರ: 6 “ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”. ಉದಾ:ಅ ಇ ಉ ಋ ಎ ಒ ದೀರ್ಘ ಸ್ವರ: 7 “ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”. ಉದಾ:ಆ ಈ ಊ ಏ ಓ ಐ ಔ ಪ್ಲುತ ಸ್ವರ: “ಮೂರು ಮಾತ್ರೆಗಳ ಕಾಲದಲ್ಲಿ ...